Hebrews 3

ಮೋಶೆಗಿಂತ ಯೇಸು ಶ್ರೇಷ್ಠನು

1ಆದ್ದರಿಂದ ಪರಿಶುದ್ಧರಾದ ಸಹೋದರರೇ, ಪರಲೋಕದ
3:1 ಎಫೆ. 4:1; ಫಿಲಿ. 3:14; 2 ತಿಮೊ. 1:9:
ಕರೆಯುವಿಕೆಗೆ ಪಾಲುಗಾರರಾಗಿರುವವರೇ, ನಾವು ಒಪ್ಪಿಕೊಂಡಿರುವ
3:1 ಯೋಹಾ 20:21. ಅಥವಾ ದೇವಪ್ರೇಷಿತನೂ, ದೇವರಿಂದ ಕಳುಹಿಸಲ್ಪಟ್ಟವನು.
ಅಪೊಸ್ತಲನೂ ಮತ್ತು ಮಹಾಯಾಜಕನೂ ಆಗಿರುವ ಯೇಸುವನ್ನು ಗಮನವಿಟ್ಟು ಯೋಚಿಸಿರಿ.

2
3:2 ಅರಣ್ಯ. 12:7; ಇಬ್ರಿ. 5:5:
ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ, ಯೇಸುವೂ ತನ್ನನ್ನು ನೇಮಕ ಮಾಡಿರುವಾತನಿಗೆ ನಂಬಿಗಸ್ತನಾಗಿದ್ದಾನೆ.
3ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವುದರಿಂದ ಮೋಶೆಗಿಂತ ಯೇಸು ಹೆಚ್ಚಾದ ಗೌರವಕ್ಕೆ ಯೋಗ್ಯನೆಂದೆಣಿಸಲ್ಪಟ್ಟಿದ್ದಾನೆ. 4ಪ್ರತಿಯೊಂದು ಮನೆಯನ್ನು ಯಾರೊಬ್ಬನು ಕಟ್ಟಿರುವನು, ಆದರೆ
3:4 ಎಫೆ. 2:10; 3:9:
ಸಮಸ್ತವನ್ನು ಕಟ್ಟಿದಾತನು ದೇವರೇ.

5ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾದ
3:5 ವಿಮೋ. 14:31; ಧರ್ಮೋ. 34:5; ಯೆಹೋ. 1:2; 8:31; ಕೀರ್ತ. 105:26; ಪ್ರಕ. 15:3:
ಸೇವಕನಾಗಿದ್ದನು. ಅವನು ಮುಂದೆ ಪ್ರಕಟವಾಗಬೇಕಾಗಿದ್ದಂಥ ವಿಷಯಗಳಿಗೆ
3:5 ಧರ್ಮೋ. 18:15,18,19:
ಸಾಕ್ಷಿಕೊಟ್ಟಿದ್ದಾನೇ.
6ಆದರೆ ಕ್ರಿಸ್ತನಾದರೋ
3:6 ಇಬ್ರಿ. 1:2:
ಮಗನಾಗಿ ದೇವರ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ. ನಾವು ನಮ್ಮ ಭರವಸೆಯನ್ನೂ, ನಿರೀಕ್ಷೆಯ ಮಹತ್ವವನ್ನೂ,
3:6 ಇಬ್ರಿ. 3:14; 6:11; ಮತ್ತಾ 10:22; ಪ್ರಕ. 2:26:
ಕಡೆ ತನಕ ಗಟ್ಟಿಯಾಗಿ ಹಿಡಿದುಕೊಂಡಿದ್ದರೆ
3:6 1 ಕೊರಿ. 3:16; 6:19; 2 ಕೊರಿ. 6:16; ಎಫೆ. 2:21; 1 ತಿಮೊ. 3:15; 1 ಪೇತ್ರ 2:5:
ನಾವೇ ದೇವರ ಮನೆಯಾಗಿರುತ್ತೇವೆ.

ದೇವರು ಮಕ್ಕಳಿಗಿರುವ ವಿಶ್ರಾಂತಿ

7ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ,

<<
3:7 ಕೀರ್ತ. 95:7-11; ಇಬ್ರಿ. 3:15:
ನೀವು ಈ ದಿನ ದೇವರ ಸ್ವರಕ್ಕೆ ಕಿವಿಗೊಡುವುದಾದರೆ,
8
3:8 ವಿಮೋ. 17:7:
ಇಸ್ರಾಯೇಲ್ಯರು ಅರಣ್ಯದಲ್ಲಿ, ದೇವರನ್ನು ಪರೀಕ್ಷಿಸಿದ ದಿನದಲ್ಲಿ ಹಠಮಾರಿಗಳಾದಂತೆ
ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.

9ನಿಮ್ಮ ಹಿರಿಯರು ಮೊಂಡುತನದಿಂದ ನನ್ನನ್ನು ಪರೀಕ್ಷಿಸಿ,

3:9 ವಿಮೋ. 16:35; ಅರಣ್ಯ. 14:33,34; ಅ. ಕೃ. 7:36,42:
ನಲವತ್ತು ವರ್ಷ ನನ್ನ ಕೃತ್ಯಗಳನ್ನು ನೋಡಿದರು.
10ಆದ್ದರಿಂದ, ನಾನು ಈ ಸಂತತಿಯವರ ಮೇಲೆ ಬಹಳ ಬೇಸರಗೊಂಡು,
<ಅವರು ಯಾವಾಗಲೂ ತಪ್ಪಿಹೋಗುವ ಹೃದಯವುಳ್ಳವರೂ,
ಅವರು ನನ್ನ ಮಾರ್ಗಗಳನ್ನು ತಿಳಿಯದವರೂ> ಎಂದು ನಾನು ಹೇಳಿದೆ.
11ಹೀಗಿರಲು <ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು
3:11 ಇಬ್ರಿ. 4:3,5:
ಕೋಪಗೊಂಡು ಪ್ರಮಾಣಮಾಡಿದೆನು.> >>

12ಸಹೋದರರೇ,
3:12 ಮತ್ತಾ 16:16; 2 ಕೊರಿ. 3:3; 1 ತಿಮೊ. 4:10:
ಜೀವಸ್ವರೂಪನಾದ ದೇವರನ್ನು ತ್ಯಜಿಸಿ ಬಿಡುವ ಅಪನಂಬಿಕೆಯುಳ್ಳ ದುಷ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರದಂತೆ ಜಾಗರೂಕರಾಗಿ ನೋಡಿಕೊಳ್ಳಿರಿ.
13ನಿಮ್ಮಲ್ಲಿ ಒಬ್ಬರಾದರೂ ಪಾಪದಲ್ಲಿ ಸಿಕ್ಕಿ
3:13 ಯೆಶಾ. 44:20; ರೋಮಾ. 7:11; ಎಫೆ. 4:22:
ಮೋಸಹೋಗಿ ಕಠಿಣರಾಗದಂತೆ, ‘ಇಂದು’ ಎಂದು ಕರೆಯಲ್ಪಡುವ ಅವಕಾಶ ಇನ್ನೂ ಇರುವಾಗಲೇ, ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ.

14ಮೊದಲಿನಿಂದಲೂ ಇರುವ ನಮ್ಮ ಭರವಸೆಯನ್ನು
3:14 ಇಬ್ರಿ. 3:6; 10:23; 1 ಕೊರಿ. 15:2:
ಅಂತ್ಯದ ವರೆಗೂ ದೃಢವಾಗಿ ಹಿಡಿದುಕೊಳ್ಳುವುದಾದರೆ
3:14 ಅಥವಾ, ನಮ್ಮ ಹಿರಿಯರು ಎದುರು ನೋಡುತ್ತಿದ್ದ ಕ್ರಿಸ್ತನಲ್ಲಿ.
ನಾವು ಕ್ರಿಸ್ತನಲ್ಲಿ ಪಾಲುಗಾರರಾಗುತ್ತೇವೆ.

15<<
3:15 ಕೀರ್ತ. 95:7-11; ಇಬ್ರಿ. 3:7; 4:7:
ನೀವು ಈ ಹೊತ್ತು ದೇವರ ಸ್ವರವನ್ನು ಕೇಳುವುದಾದರೆ,
ಪೂರ್ವಿಕರು ಮೊಂಡುತನದಿಂದ ಮಾಡಿದಂತೆ,
ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.>>

16
3:16 ಅರಣ್ಯ. 14:2,23,24,30; ಧರ್ಮೋ. 1:34-38:
ಆತನು ನುಡಿದದ್ದನ್ನು ಕೇಳಿ ವಿರೋಧಿಸಿದವರು ಯಾರು? ಮೋಶೆಯ ಮೂಲಕ ಐಗುಪ್ತದೊಳಗಿಂದ ಹೊರಗೆ ಕರೆತರಲ್ಪಟ್ಟವರೆಲ್ಲರೂ ಅಲ್ಲವೇ?
17ಮತ್ತು ದೇವರು ನಲವತ್ತು ವರ್ಷ ಯಾರ ಮೇಲೆ ಬಹಳವಾಗಿ ಕೋಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ?
3:17 ಅರಣ್ಯ. 14:29; 1 ಕೊರಿ. 10:5:
ಅವರ ಶವಗಳು ಅರಣ್ಯದಲ್ಲಿ ಬಿದ್ದುಹೋದವು.
18ನನ್ನ ವಿಶ್ರಾಂತಿಯಲ್ಲಿ
3:18 ಧರ್ಮೋ. 1:34,35; ಇಬ್ರಿ. 4:2:
ನೀವು ಸೇರುವುದೇ ಇಲ್ಲವೆಂದು ಯಾರನ್ನು ಕುರಿತು ಆತನು ಪ್ರಮಾಣಮಾಡಿದನೂ? ಅವಿಧೇಯರನ್ನು ಕುರಿತಲ್ಲವೇ?
3:19 ಇಬ್ರಿ. 4:6; ಕೀರ್ತ. 78:21; 106:24
ಅವರು ವಿಶ್ರಾಂತಿಯಲ್ಲಿ ಸೇರಲಾರದೇ ಹೋದದ್ದು ಅವರ ಅಪನಂಬಿಕೆಯಿಂದಲೇ ಎಂದು ನಾವು ಅರಿತಿದ್ದೇವೆ.

19

Copyright information for KanULB